Faculty Dashboard

SESHADRIPURAM COLLEGE, TUMAKURU

Faculty & Research Directory

Meet our educators. Explore their expertise, scholarship and academic contributions.

← All faculty
SIDDESHA D J

SIDDESHA D J

Assistant professor

Kannada

MA, B Ed, NET, KSET

Literature
8Publications
1Projects
—Citations
—H-index

About

ದುಗ್ಗೇನಹಳ್ಳಿ ಸಿದ್ದೇಶ ಅವರು 1987 ಮಾರ್ಚ್ 3 ರಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ದುಗ್ಗೇನಹಳ್ಳಿ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದರು. ತಂದೆ ಜಯರಾಮಯ್ಯ, ತಾಯಿ ಲಲಿತಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು, ಹೊಳವನಹಳ್ಳಿಯಲ್ಲಿ ಪ್ರೌಢ ಶಿಕ್ಷಣವನ್ನು , ಕೊರಟಗೆರೆಯಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪಡೆದರು. ತುಮಕೂರಿನ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಿಂದ ಬಿಎಡ್ ಪದವಿಯನ್ನು, ತುಮಕೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿಯನ್ನು ಪಡೆದರು. ಜೊತೆಗೆ ಮನೆಯಲ್ಲಿ ಅಪ್ಪನ ತತ್ವಪದಗಳನ್ನು ಕೇಳುತ್ತ ಬೆಳೆದವರು.
.
ಕರ್ನಾಟಕ ಸರ್ಕಾರದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಕೈಗೆತ್ತಿಕೊಂಡಿದ್ದ ಮಹತ್ವದ ಯೋಜನೆ 'ಕರ್ನಾಟಕದ ಸಮಗ್ರ ತತ್ವಪದಗಳ ಜನಪ್ರಿಯ ಮಾಲೆ' ಯೋಜನೆಯಲ್ಲಿ ತುಮಕೂರು ಜಿಲ್ಲೆಯ ಕ್ಷೇತ್ರತಜ್ಞರಾಗಿ ಕೆಲಸ ಮಾಡಿದ್ದಾರೆ.

ಕಾವ್ಯ, ಕತೆ, ವಚನ,ವಿಮರ್ಶೆ ಮೀಮಾಂಸೆಯನ್ನು ಮುಖ್ಯವಾಗಿಟ್ಟುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಈಗಾಗಲೇ ಇವರು ಹಸಿಮಣ್ಣಿನ ಹಾಡು, ನುಡಿವ ಹಂಸ ಮತ್ತು ಗುರುವಿನ ಜೋಳಿಗೆ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಸಂಪಾದಿತ ಕೃತಿಗಳು ದೇಸಿಕಥನಗಳು, ಸೀಳುದಾರಿಯ ಸಂಕಥನಗಳು, ಅಳಿಲು ಬಿಳಲು, ನೆಲದ ಕಣ್ಣುಗಳು ಮತ್ತು ಸಾಹಿತ್ಯ ಚಿಂತನೆಗಳು. ರಾಜ್ಯ, ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. ಪ್ರಸ್ತುತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಶೇಷಾದ್ರಿಪುರಂ ಕಾಲೇಜು ತುಮಕೂರು - ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Experience: 13

Academic profile

Education & qualifications
  • BA, BEd
  • MA
  • NET, KSET
Professional experience
  • Tumakuru university 4 years.
  • Seshadripuram college Bangalore 3 years
  • Seshadripuram college Tumakuru 5 years
Research interests
  • Janapada, vimarshe, poetry

Selected publications

  • Seeludariya kathanagalu :- jayamangali prakashana
  • Neldakannugalu :- jayamangali prakashana
  • Guruvina jolige :- jayamangali prakashana
  • Alilu bilalu :- jayamangali prakashana
  • Sahitya chinthanegalu :-jayamangali prakashana
Seshadripuram College, Tumakuru · Faculty information maintained by the college.